ಲಗ್ನದಲ್ಲಿ ರವಿ ಇದ್ದರೆ ಯಾವ ಫಲ ಸಿಗುತ್ತದೆ?
ಹಾಯ್ ಎಲ್ಲರಿಗೂ ನಮಸ್ಕಾರ Kannadaastrovinu ಜಾಲತಾಣಕ್ಕೆ ಸ್ವಾಗತ ಇವತ್ತು ನಾವು ಜಾತಕದಲ್ಲಿ ಲಗ್ನ ಭಾವದಲ್ಲಿ ಸೂರ್ಯ ಇದ್ದರೆ ಸಿಗುವ ಫಲಗಳನ್ನು ನೋಡೋಣ ಸಾಮಾನ್ಯವಾಗಿ ಜಾತಕದ ಲಗ್ನ ಭಾವ ದೇಹ ಶರೀರ ವ್ಯಕ್ತಿತ್ವ ಅಂತ ಪರಿಗಣಿಸಲಾಗುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಲಗ್ನ ಭಾವದಲ್ಲಿ ಇರುವ ಗ್ರಹಗಳಿಗೆ ಅನುಗುಣವಾಗಿ ಫಲ ಹೇಳಲಾಗುತ್ತದೆ ಲಗ್ನದಲ್ಲಿ ಇರುವ ಯಾವುದೇ ಗ್ರಹ ಮನುಷ್ಯನ ಮೇಲೆ ನೇರ ಪರಿಣಾಮ ಬೀರೋದರಲ್ಲಿ ಸಂದೇಹ ಇಲ್ಲ ಈಗ ನಾವು ಲಗ್ನದಲ್ಲಿ ರವಿ ಗ್ರಹ ಸ್ಥಿತ ಆಗಿದ್ದರೆ ಅದರ ಫಲಗಳನ್ನು ನೋಡೋಣ ರವಿ ನವಗ್ರಹಗಳಲ್ಲಿ ರಾಜ ಅಂತಾನೆ ಹೇಳಬಹುದು ಇದು ಅಗ್ನಿ ತತ್ವದ ಗ್ರಹ ಆಗಿರುತ್ತದೆ ಇದು ಲಗ್ನದಲ್ಲಿ ಕುಳಿತಾಗ ತನ್ನ ಪ್ರಬಾವವನ್ನು ಜಾತಕದ ವ್ಯಕ್ತಿತ್ವದ ಮೇಲೆ ಬೀರುತ್ತದೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಲಗ್ನಕ್ಕೆ ರವಿ ಯೋಗಕಾರಕ ಅಥವಾ ಮಾರಕನಾ ಎನ್ನುವ ಅಂಶ ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಮತ್ತು ಸೂರ್ಯನ ಡಿಗ್ರಿ ಕೂಡ ಸರಿಯಾಗಿ ಇರಬೇಕು ಮತ್ತು ಇನ್ನೊಂದು ಅಂಶ ಎಂದರೆ ಸೂರ್ಯನ ಜೊತೆ ಪಾಪಗ್ರಹಗಳು ಅಥವಾ ಅವುಗಳ ದೃಷ್ಟಿ ಕೂಡ ಇರಬಾರದು ಇಷ್ಟು ನಿಯಮ ಇದ್ದರೆ ಸೂರ್ಯ ಜಾತಕರಿಗೆ ಪೂರ್ಣ ಪ್ರಮಾಣದ ಫಲ ಕೊಡುತ್ತಾನೆ ಈ ಕಾರಣ ರವಿ ಲಗ್ನದಲ್ಲಿ ಇದ್ದ ತಕ್ಷಣ ಫಲ ಹೇಳಲು ಬರುವುದಿಲ್ಲ ಕೂಲಂಕಷವಾಗಿ ಪರೀಕ್ಷಿಸಿ ನಂತರ ಫಲ ನಿರ್ಣಯ ಮಾಡಬೇಕಾಗುತ್ತದೆ
ಲಗ್ನದಲ್ಲಿ ರವಿ ಇರುವ ವ್ಯಕ್ತಿಗಳ ಸಾಮಾನ್ಯ ಲಕ್ಷಣಗಳು
ಜಾತಕರ ಮುಖದಲ್ಲಿ ಕಾಂತಿ ಲಾವಣ್ಯತೆ ಇರುತ್ತದೆ ಇವರ ಜೊತೆ ಜನ ಬೆರೆಯೋಕೆ ಇಷ್ಟ ಪಡುತ್ತಾರೆ , ಮಾತಲ್ಲಿ ಶಕ್ತಿ ಇರುತ್ತೆ,ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಉತ್ಕಟ ಹಂಬಲ,ಬೇರೆಯವರಿಗೆ ಸಹಾಯ ಸೇವೆ ಮಾಡುವ ಹಂಬಲ,ಶಕ್ತಿ ಉತ್ಸಾಹ,ಸ್ವಾಭಿಮಾನಿ, ಅಹಂಕಾರ, ಇಗೋ ಇರುತ್ತೆ,ಅಧಿಕಾರೀ ಪೃವೃತ್ತಿ, ಕೆಲ ಬಾರಿ ಬೇರೆಯವರ ಮೇಲೆ ಅಧಿಕಾರ ಚಲಾಯಿಸಬಹುದು,ಆದರೆ ಇವರ ವಿಷಯದಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ಸಹಿಸಲ್ಲ, ನಡೆದದ್ದೇ ದಾರಿ ಎನ್ನುವ ಸ್ವಭಾವ ಇದು ಬೇರೆಯವರಿಗೆ ಕಿರಿಕಿರಿ ತರಬಹುದು ತಮ್ಮ ಬಗ್ಗೆನೆ ಗಮನ ಜಾಸ್ತಿ ಕೊಡುತ್ತಾರೆ ,ಕಣ್ಣಿನ ಸಮಸ್ಯೆ ಸ್ವಲ್ಪ ಇರುತ್ತೆ,ತಲೆಯಲ್ಲಿ ಗಾಯ ಆಗಬಹುದು,ಜನ್ಮಸ್ಥಳ ದಿಂದ ದೂರ ಹೋಗಿ ಸಂಪಾದಿಸಿ ಅದನ್ನು ಕುಟು ಕುಟುಂಬಕ್ಕೆ ವ್ಯಯ ಮಾಡಬಹುದು,ಯಾವುದರಲ್ಲಿಯೂ ಪೂರ್ಣತೃಪ್ತಿ ಇರಲ್ಲ ಇವರಿಗೆ ,ಮಹತ್ವಾಕಾಂಕ್ಷೆ ಜಾಸ್ತಿ,ಬೇರೆಯವರಿಗೆ ಪ್ರೇರಣೆ ಕೊಡ್ತಾರೆ ಕುಟುಂಬದ ಕಡೆಗೆ ಕಾಳಜಿ ಮಹತ್ವ ಇರುತ್ತೆ ಆದರೆ ವೈವಾಹಿಕ ಜೀವನ ಅಷ್ಟೇನೂ ತೃಪ್ತಿಕರವಾಗಿ ಇರಲ್ಲ ಅಂತ ಹೇಳಬಹುದು ಇದಕ್ಕೆ ಕಾರಣ ಸಂಗಾತಿಯ ಮೇಲೆ ಅಧಿಕಾರ ಚಲಾಯಿಸಬಹುದು ಈ ಕಾರಣ ಸಂಗಾತಿಗೆ ಇದು ಸರಿಬರುವುದಿಲ್ಲ ಇದು ಇಬ್ಬರ ಮನಸ್ತಾಪಕ್ಕೆ ಕಾರಣ ಆಗಬಹುದು ,ಯಾರನ್ನು ಫಾಲೋ ಮಾಡಲ್ಲ ಇವರು ,ವಿಶ್ವಾಸಾರ್ಹ ವ್ಯಕ್ತಿ,ಸಮಾಜದಲ್ಲಿ ಹೆಸರು ಜನಪ್ರಿಯತೆ ಇರುತ್ತದೆ ಸುಳ್ಳು ಕಪಟತೆ ಇಷ್ಟ ಆಗಲ್ಲ ಇವರಿಗೆ ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದರೂ ಕೂಡ ಅದರಿಂದ ಹೊರಬರುವ ಸಾಮರ್ಥ್ಯ ಜೀವನದ ಅಂತ್ಯದವರೆಗೂ ದೇಹದ ಎಲ್ಲಾ ಭಾಗಗಳು ಚೆನ್ನಾಗಿರುತ್ತದೆ ಕೋಪ ಜಾಸ್ತಿ ಸಣ್ಣಪುಟ್ಟ ವಿಷಯಕ್ಕೂ ಕೋಪ ಬರುತ್ತದೆ ಸ್ವತಂತ್ರ ವಿಚಾರ ಸ್ವತಂತ್ರ ವಾಗಿರಲು ಇಷ್ಟ,ಹಣದ ಸಮಸ್ಯೆ ಇರಲ್ಲ ಕೂದಲು ಉದುರಬಹುದು ವಯಸ್ಸಾದ ಹಾಗೆ ಜನರನ್ನು ಸುಲಭವಾಗಿ ಮ್ಯಾನೇಜ್ ಮಾಡ್ತೀರಿ ಯಾರಿಗೂ ಹೆದರಲ್ಲ ನಾಯಕತ್ವ ಗುಣ ಇವರು ಹೇಗೆ ಇದ್ದರೂ ಕೂಡ ಸಮಾಜದಲ್ಲಿ ಪ್ರತಿಷ್ಠೆ ಗೌರವ ಸಿಗುತ್ತದೆ ಸಮಾಜದಲ್ಲಿ ಜನಪ್ರಿಯತೆ ಇರುತ್ತದೆ ತಾನು ಉನ್ನತ ಮಟ್ಟದಲ್ಲಿ ಇರಬೇಕು ಉನ್ನತ ಸ್ಥಾನಮಾನ ಸಿಗವೇಕು ಎನ್ನುವ ಆಸೆ ಇರುತ್ತೆ ಸರಕಾರಿ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಫಲತೆ ಸುಲಭವಾಗಿ ಸಿಗಬಹುದು ಇದಕ್ಕೆ ಕುಂಡಲಿಯಲ್ಲಿ ಸೂರ್ಯನ ಸ್ಥಾನ ಮುಖ್ಯ ಆಗುತ್ತದೆ ದೈಹಿಕವಾಗಿ ಮದ್ಯಮ ಎತ್ತರ ಇರುತ್ತಾರೆ ತಲೆಗೂದಲು ಬೇಗ ಉದುರುವ ಸಂಭವ ಇರುತ್ತೆ ಇವರಿಗೆ ದೇಹದಲ್ಲಿ ಉಷ್ಣತೆ ಹೆಚ್ಚು ಇರುವ ಕಾರಣ ಅಧಿಕ ಉಷ್ಣ ಆಹಾರ ವರ್ಜಿಸಬೇಕಾಗುತ್ತದೆ
ವಿವಿಧ ರಾಶಿಗಳಲ್ಲಿ ರವಿ ಲಗ್ನದಲ್ಲಿ ಕುಳಿತಾಗ ಕೊಡುವ ಫಲಗಳು
ಮೇಷ ಲಗ್ನ ಆಗಿ ಉಚ್ಚನಾಗಿ ಇದ್ದರೆ ರಾಜಕೀಯ ಅಥವಾ ಯಾವುದೇ ಅಧಿಕಾರಿಯಾಗಿ ಅಥವಾ ಸರಕಾರಿ ಕ್ಷೇತ್ರದಲ್ಲಿ ಇರುವ ಸಂಭವ ಇವರ ಜನಪ್ರಿಯತೆ ಹೆಚ್ಚು ಇರುತ್ತದೆ
ವೃಷಭ ಲಗ್ನ ಆಗಿ ಲಗ್ನದಲ್ಲಿ ರವಿ ಇದ್ದಾಗ ರವಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು ಕಾಮಸಕ್ತಿ ಕೊಡಬಹುದು ಸ್ತ್ರೀ ಪ್ರತಿ ಆಕರ್ಷಣೆ ಸ್ತ್ರೀ ಯರಲ್ಲಿ ಜನಪ್ರಿಯ ಆಗುತ್ತಾರೆ
ಮಿಥುನದಲ್ಲಿ ಉಚ್ಚ ಆದರೆ
ತ್ವರಿತ ನಿರ್ಣಯ -ಬುದ್ಧಿವಂತ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವಲ್ಲಿ ಉತ್ತಮ ಸಾಮರ್ಥ್ಯ
ಕಟಕದಲ್ಲಿ ಉಚ್ಚ ಆದರೆ
ಪೋಷಕ ಭಾವನೆಯನ್ನು ಹೊಂದಿರುತ್ತಾರೆ ಮತ್ತು ಕುಟುಂಬ ಮತ್ತು ಮನೆಯ ಜೊತೆ ಆಪ್ತ ಸಂಪರ್ಕ ಹೊಂದಿರುತ್ತಾರೆ ಭಾವನಾತ್ಮಕವಾಗಿ ತುಂಬಾ ಪ್ರಬಲ
ಸಿಂಹದಲ್ಲಿ ಉಚ್ಚ ಆದರಡ
ಸ್ವ ಸಾಮರ್ಥ್ಯ ವರ್ಚಸ್ವಿ,ತಮ್ಮದೆ ರೀತಿಯಲ್ಲಿ ತಮ್ಮನ್ನು ವ್ಯಕ್ತಪಡಿಸುತ್ತಾರೆ. ಬೇರೆಯವರ ಗಮನ ಸೆಳೆಯುವ ಸಾಮರ್ಥ್ಯ
ಕನ್ಯಾ ಲಗ್ನದಲ್ಲಿ ಉಚ್ಚ ಆದರೆ
ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಪ್ರಯತ್ನಿಸುವ ಮತ್ತು ವಿಶ್ಲೇಷಣಾತ್ಮಕ ವ್ಯಕ್ತಿತ್ವ ಎಲ್ಲ ಕೆಲಸದಲ್ಲಿ ನಿಯಮಬದ್ದತೆ
ತುಲಾ ಲಗ್ನದಲ್ಲಿ
ಸಾಮಾಜಿಕವಾಗಿ ಹೆಚ್ಚು ಬೆರೆಯುವ : ಜಗತ್ತನ್ನು ದೈನಂದಿನ ಜೀವನದ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಪ್ರಬಲ ಮತ್ತು ಪ್ರಭಾವಶಾಲಿ ಆಕರ್ಷಕ ವ್ಯಕ್ತಿತ್ವ ಸಮಾಜದ ಭಾಗವಾಗಿರುವುದನ್ನು ಆನಂದಿಸುತ್ತಾರೆ ಮತ್ತು ಇತರರೊಂದಿಗೆ ಒಳ್ಳೆಯ ಸಂಬಂಧವನ್ನು ಬಯಸುತ್ತಾರೆ.
ವೃಶ್ವಿಕ ಲಗ್ನದಲ್ಲಿ ಸೂರ್ಯ
ಅತ್ಯಂತ ಉತ್ಸಾಹ ಶಕ್ತಿಶಾಲಿ ರಹಸ್ಯಮಯಿ ವ್ಯಕ್ತಿತ್ವ
ನಿರ್ದಿಷ್ಟ ಗುರಿಗಳನ್ನು ಹೊಂದಿರುತ್ತಾರೆ
ಧನು ಲಗ್ನದಲ್ಲಿ ಸೂರ್ಯ
ನೀರಸ ವಿಷಯ ವಸ್ತು ಜನರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ ಕಲಿಕೆಯನ್ನು ಆನಂದಿಸುತ್ತಾರೆ ಏನಾದರೂ ವಿಷಯ ಅಧ್ಯಯನ ಮಾಡುವಲ್ಲಿ ಆಸಕ್ತಿ ಮತ್ತು ಸಂಚಾರಿ ಮನೋಭಾವ
ಮಕರ ಲಗ್ನದಲ್ಲಿ ಸೂರ್ಯ ಇದ್ದರೆ
ಒಳ್ಳೆಯ ಶಿಕ್ಷಣ ಹೊಂದುವ ಆಸಕ್ತಿ ತನ್ನ ಗುರು ಪೂರ್ಣ ಮಾಡುವಲ್ಲಿ ಪರಿಣಿತ ಆಗಿರುತ್ತಾರೆ ಸಂವೇದನಶೀಲ ಮತ್ತು ಧೃಢಮನಸ್ಸು
ಕುಂಭದಲ್ಲಿ ಸೂರ್ಯ ಇದ್ದರೆ
ವರ್ತಮಾನದ ಮೇಲೆ ಕೇಂದ್ರೀಕರಿಸುವ ಬದಲು ಭವಿಷ್ಯದ ಕಡೆಗೆ ನೋಡಲು ಇಷ್ಟಪಡುತ್ತಾರೆ ತಮ್ಮ ಉದ್ದೇಶಕ್ಕೆ ತಕ್ಕಂತೆ ಗುರಿತಲುಪುವ ಸಾಮರ್ಥ್ಯ ಎಲ್ಲರ ಎದುರು ಎದ್ದು ಕಾಣೋದು ಅಂದರೆ ಇಷ್ಟ ಇವರಿಗೆ
ಮೀನ ಲಗ್ನ ಆದರೆ
ಸೂಕ್ಷ್ಮ ಮತ್ತು ಆಕರ್ಷಕ ಹೃದಯದ ಆಕರ್ಷಕ ವ್ಯಕ್ತಿಗಳು. ಅವರ ಭಾವನೆಗಳು ಆಳವಾಗಿ ಇರುತ್ತದೆ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಕಲೆಯ ಬಗ್ಗೆ ಕೂಡ ವಿಶೇಷ ಆಸಕ್ತಿ
ಸೂರ್ಯ ಧನಾತ್ಮಕ ಆಗಿ ಜಾತಕದಲ್ಲಿ ಇದ್ದರೆ ಅಧಿಕಾರ ಗೌರವ ಪ್ರತಿಷ್ಟೆ ಸಿಗಬಹುದು,ಒಳ್ಳೆಯ ಆತ್ಮವಿಶ್ವಾಸ ಹೊಂದಿರುತ್ತಾರೆ ಶಕ್ತಿ ಉತ್ಸಾಹ ಆತ್ಮ ಶಕ್ತಿ ಚೆನ್ನಾಗಿರುತ್ತದೆ ಇವರ ಸಲಹೆ ಜನರನ್ನು ಆಕರ್ಷಿಸುತ್ತದೆ ಸಮರ್ಥ ನಾಯಕತ್ವ ಗುಣ ಸಿಕ್ಕ ಅವಕಾಶ ಸರಿಯಾಗಿ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸುವ ಗುಣ
ಸೂರ್ಯ ನಕಾರಾತ್ಮಕವಾಗಿ ಇದ್ದರೆ ಹೆಚ್ಚು ಅಹಂ ಸ್ವ ಕೇಂದ್ರಿತ ಎಲ್ಲರೂ ಇವರ ಇಚ್ಚೆಯಂತೆ ಕೆಲಸ ಮಾಡಬೇಕು ಅಂದುಕೋತಾರೆ,ಬೇರೆಯವರ ಮಾತನ್ನು ಕೇಳುವುದಿಲ್ಲ ಸಮಾಜದಲ್ಲಿ ಗೌರವ ಪ್ರತಿಷ್ಠೆ ಕಡಿಮೆ ಅತಿಯಾದ ಇಗೋ ಕಾರಣ ಪ್ರೇಮಜೀವನದಲ್ಲಿ ವೈಫಲ್ಯ ಎದುರಿಸಬಹುದು,ತನ್ನ ಸಂಗಾತಿ,ಸ್ನೇಹಿತರು,ಕುಟುಂಬ ಸದಸ್ಯರು,ದಹೋದ್ಯೋಗಿಗಳ ಮೇಲೆ ತಮ್ಮ ನಿರ್ಧಾರ, ಅಧಿಕಾರ ಹೇರಲು ಪ್ರಯತ್ನಿಸಬಹುದು, ಎಲ್ಲರಿಗಿಂತ ತಾವು ಶ್ರೇಷ್ಠ ಅನ್ನುವ ಭಾವನೆ ಇವರ ತಲೆಯಲ್ಲಿ ತುಂಬಿರುತ್ತದೆ,ಇದು ಅವರಿಗೆ ಗುಪ್ತ ಶತ್ರುಗಳನ್ನು ಉಂಟುಮಾಡಬಹುದು,ಇವರು ಏನಾದರೂ ಉದ್ಯೋಗದಾತ ಆದರೆ ತನ್ನ ಸಿಬಂದಿಗಳ ಮೇಲೆ ಅಧಿಕಾರ ಚಲಾಯಿಸಬಹುದು ಅಥವಾ ಅನುಚಿತವಾಗಿ ನಡರದುಕೊಳ್ಳಬಹುದು
ಸೂರ್ಯ ಲಗ್ನದಲ್ಲಿ ಇದ್ದಾಗ ಕೊಡುವ ಧನಾತ್ಮಕ ಅಂಶಗಳು
೧) ಇವರು ಹುಟ್ಟು ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ
೨) ದೃಢವಾದ ವ್ಯಕಿತ್ವ ಬುದ್ಧಿವಂತ
೩) ವ್ಯವಹಾರಗಳಲ್ಲಿ ಪ್ರಬುದ್ಧತೆ, ಸಾಮಾನ್ಯವಾಗಿ ಬಹಳ ಜಿಜ್ಞಾಸೆ ಮತ್ತು ಸ್ವಭಾವತಃ ಕುತೂಹಲದಿಂದ ಕೂಡಿರುತ್ತಾರೆ
ಸೂರ್ಯನು 1 ನೇ ಮನೆಯಲ್ಲಿದ್ದಾಗ ಕೆಲವು ನಕಾರಾತ್ಮಕ ಪರಿಣಾಮಗಳು
1.ಅವರ ಯಶಸ್ಸಿನ ಕಾರಣದಿಂದ, ಈ ಜನರು ಕೆಲವೊಮ್ಮೆ ಇತರರಿಗೆ ಸ್ನೋಬಿಶ್ ಆಗಿ ಕಾಣಿಸುತ್ತಾರೆ. ಆದ್ದರಿಂದ, ಅವರು ತಮ್ಮ ನಡವಳಿಕೆಯ ಮೇಲೆ ನಿಗಾ ಇಡಬೇಕು
ಆ ಮೂಲಕ ಅವರು ಜನರನ್ನು ಉಜ್ಜುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾರೆ
ತಪ್ಪು ದಾರಿ. 2. ಅವರು ತಮ್ಮ ಎಲ್ಲಾ ಪ್ರಯತ್ನಗಳಲ್ಲಿ ಅದೃಷ್ಟವಂತರು ಎಂದು ಪರಿಗಣಿಸಿ, ಇವು
ಸ್ಥಳೀಯರು ಸುಲಭವಾಗಿ ಅತಿಯಾದ ಆತ್ಮವಿಶ್ವಾಸವನ್ನು ಪಡೆಯುತ್ತಾರೆ. 3. ಅವರು ಕೂಡ ಆಗುವ ಪ್ರವೃತ್ತಿಯನ್ನು ಹೊಂದಿದ್ದಾರೆ
ವಿಷಯಗಳನ್ನು ತಮ್ಮ ರೀತಿಯಲ್ಲಿ ಮಾಡದಿದ್ದರೆ ಅತ್ಯಂತ ಮೊಂಡುತನದ ಮತ್ತು ಅತಿಯಾದ ಆಕ್ರಮಣಕಾರಿ.
ಲಗ್ನದಲ್ಲಿ ರವಿ ಇರುವ ಜಾತಕರು ಗಮನಿಸಬೇಕಾದ ವಿಷಯಗಳು-
ಶರಾಬು,ಮಾಂಸ ಇತರ ದುಶ್ಚಟ ಮಾಡಿದರೆ ಸೂರ್ಯನ ಪ್ರಭಾವ ಕಡಿಮೆ ಆಗುತ್ತದೆ,ಹಗಲು ಸಂಭೋಗ ಮಾಡಿದರೆ ಪ್ರಭಾವ ಕಡಿಮೆ ಆಗುತ್ತದೆ ಲಗ್ನದಲ್ಲಿ ರವಿ ಇದ್ದು ಎಂಟರಲ್ಲಿ ಶನಿ ಇದ್ದರೆ ಪತ್ನಿಸುಖ ಸಿಗುವುದಿಲ್ಲ
ಲಗ್ನದಲ್ಲಿ ರವಿ ಇದ್ದು ನೀಚ ಆದರೆ ಯಶಸ್ಸು ಸಾಧಿಸೋದು ನಿಧಾನ ಆಗಬಹುದು,ಕೈಬರಹ ಚೆನ್ನಾಗಿರಲ್ಲ
ಲಗ್ನದಲ್ಲಿ ರವಿ ರಾಹು ಜೊತೆ ಇದ್ದರೆ ಇವರ ಮಾತಲ್ಲಿ ಶಕ್ತಿ ಇರಲ್ಲ ಜನ ಆಕರ್ಷಿತರಾಗಲ್ಲ
ರವಿಯ ಡಿಗ್ರಿ ಕಡಿಮೆ ಇದ್ದು ರಾಹು ಜೊತೆ ಇದ್ದರೆ ಮುಖದಲ್ಲಿ ಕಲೆ ಗುರುತು ಕಣ್ಣಿನ ಸಮಸ್ಯೆ,
ಮೇಷ,ಸಿಂಹ,ಧನುವಲ್ಲಿದ್ದರೆ ಬಾಲ್ಯದಲ್ಲಿ ಸಮಸ್ಯೆ ತರಬಹುದು ಆದರೆ ತುಂಬಾ ಮಹತ್ವಾಕಾಂಕ್ಷೆ
ಮಿಥುನ, ತುಲಾ,ಕುಂಭ ಲಗ್ನ ಆದರೆ ಉದಾರಿ ಅಹಂಕಾರ ಕೂಡ ಕಡಿಮೆ
ಕರ್ಕ,ವೃಶ್ಚಿಕ, ಮೀನದಲ್ಲಿದ್ದರೆ ಹೃದಯಾಘಾತ ಸಂಭವ,ಎದೆ ಕ್ಯಾನ್ಸರ್